ದಿ:೪ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೊಪ್ಪಳ ಮತ್ತು ನಬಾರ್ಡ ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಬಿ.ಎಸ್.ಪವಾರ್ ಗ್ರ್ಯಾಂಡ್ ಹೋಟಲ್, ಕೊಪ್ಪಳದಲ್ಲಿ ರೈತ ಉತ್ಪಾದಕ ಕಂಪನಿಯ [FPO] ನಿರ್ದೇಶಕರಿಗೆ ಮತ್ತು ಸಿಇಒ ತರಬೇತಿ ಕಾರ್ಯಕ್ರಮವನ್ನು ರಾಮನ್ ಜಗದೀಶನ್ ಡಿಡಿಎಮ್, ನಬಾರ್ಡ ಇವರುಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತರಬೇತಿ ಪಡೆದ ರೈತ ಉತ್ಪಾದನೆ ಕಂಪನಿಯ ನಿರ್ದೇಶಕರು ಮತ್ತು ಸಿಇಒಗಳು ಒಂದು ಕಂಪನಿಗೆ ಐದು ನೂರು ಷೇರುದಾರರನ್ನು ಹೊಂದುವಂತೆ ಮಾಡಬೇಕು ಇದರಿಂದ ರೈತರಿಗೆ ಸರ್ಕಾರಿ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ. ಋತು ಮಾನಕ್ಕೆ ತಕ್ಕಂತೆ ಸಿಇಒಗಳು ಕ್ರಿಯಾ ಯೋಜನೆಗಳನ್ನು ತಯಾರಿಸಿಕೊಳ್ಳಬೇಕು. ಆಕಳು ಮತ್ತು ಎಮ್ಮೆ, ಕುರಿ, ಆಡು ಸಾಕಾಣಿಕೆಗೆ ಹೆಚ್ಚು ಒತ್ತು ಕೊಟ್ಟು ಸರ್ಕಾರದ ಯೋಜನೆಗಳನ್ನು ಪಡೆಯಬೇಕು ಎಂದರು. ಸಾವಯವ ಗೊಬ್ಬರ ತಯಾರಿಕೆ ಮಾಡಬೇಕು, ಇದನ್ನು ರೈತರಿಗೆ ಮಾರಾಟ ಮಾಡುವುದರಿಂದ ಕಂಪನಿಯು ಲಾಭವನ್ನು ಪಡೆದಂತೆ ಆಗುತ್ತದೆ ಮತ್ತು ಭೂರಕ್ಷಣೆ ಮಾಡಿದಂತೆ ಆಗುತ್ತದೆ ಇದರಿಂದ ಭೂ ಫಲವತ್ತತೆಯನ್ನು ಹೆಚ್ಚಿಸಬಹುದು ಎಂದರು.
ನಂತರ ಡಾ. ನಾಗರಾಜ ಉಪನಿರ್ದೇಶಕರು ಪಶು ಸಂಗೋಪನೆ ಇಲಾಖೆ ಕೊಪ್ಪಳ ಮಾತನಾಡಿ ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಇಷ್ಟು ಸಿಇಒ ಮತ್ತು ರೈತ ಉತ್ಪಾದಕ ಕಂಪನಿಯ ನಿರ್ದೇಶಕರನ್ನು ರನ್ನು ಒಟ್ಟಿಗೆಗೂಡಿಸಿರುವುದು ಶ್ಲಾಘನೆಯ. ಭಾರತ ದೇಶದಲ್ಲಿ ಜನ ಸಂಖ್ಯೆ ಹೆಚ್ಚಿದಂತೆ ಉತ್ಪಾದನ ಮಟ್ಟ ಕುಸಿಯುತ್ತದೆ ಇದರಿಂದ ಬೆಲೆ ಏರಿಕೆಯನ್ನು ಕಾಣಬಹುದು. ಉದಾಹರಣೆ ಒಬ್ಬ ವ್ಯಕ್ತಿ ಆರೋಗ್ಯವಾಗಿರಬೇಕು ಎಂದರೆ ವರ್ಷಕ್ಕೆ ೧೧ ಕೆ.ಜಿ. ಮಾಂಸ ತಿನ್ನುಬೇಕು ಆದರೆ ಮಾಂಸ ದೊರೆಯುವುದು ೩ ಕೆ.ಜಿ. ಮಾತ್ರ ಸಿಗುತ್ತದೆ. ವರ್ಷ ೩೦೫ ಮೊಟ್ಟೆಗಳನ್ನು ಒಬ್ಬ ವಕ್ತಿ ತಿನ್ನಬೇಕು ಆದರೆ ಒಬ್ಬ ವ್ಯಕ್ತಿ ಸರಿಸಮವಾಗಿ ಆಹಾರ ದೊರೆಯಲು ಸಾಧ್ಯವಿಲ್ಲ ಕಾರಣ ಉತ್ಪಾದನ ಮಟ್ಟ ಕಡಿಮೆ ಇದೆ. ೯.೫ ಲಕ್ಷ ಕೋಟಿ ರೂ ಹಾಲು ಉತ್ಪಾದನೆ ಮಾಡಿದೆ ಇದು ದೇಶಕ್ಕೆ ಸಾಲುತ್ತಿಲ್ಲ. ಹಸಿರು ಕ್ರಾಂತಿ ನೆಪದಲ್ಲಿ ನಾವು ರಸಗೊಬ್ಬರ ಹಾಕಿ ಇವತ್ತು ಭೂಮಿಯ ಮಣ್ಣು ನಾಶವಾಗಿದೆ. ಭೂಮಿಯ ಫಲವತ್ತತೆಯನ್ನು ಮಾಡಬೇಕಾದರೆ ಆಕಳು, ಎಮ್ಮೆ, ಕೋಳಿ, ಹಂದಿ, ಕುರಿ, ಜೇನು, ಮೂಲ, ಸಾಕುವುದರ ಮೂಲಕ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ರೈತ ಉತ್ಪಾದನೆ ಕಂಪನಿಗಳು ಪ್ರಾರಂಭ ಆಗುವುದರಿಂದ ಮಧ್ಯವರ್ತಿಗಳ ಹಾವಳಿ ಕಡಿಮೆ ಆಗುತ್ತದೆ. ಸಿಇಒ ಮತ್ತು ನಿರ್ದೇಶಕರು ಒಂದೇ ನಾಣ್ಯದ ಎರಡು ಮುಖಗಳು ಎಲ್ಲರೂ ಸಹಕಾರ ಸಮನ್ವಯತೆಯಂದ ಕಾರ್ಯನಿರ್ವಹಿಸಬೇಕು, ರೈತ ಉತ್ಪಾದಕ ಕಂಪನಿಯ ಕ್ಷೇತ್ರ ಭೇಟಿಗಳನ್ನು ಮಾಡಿ ಜ್ಞಾನ ಪಡೆಯಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳು ಶ್ರೀ ರವಿ ಸಜ್ಜನರ್ ಹುನಗುಂದ, ತೋಟಗಾರಿಕೆ ಎಫ್‌ಪಿಸಿ ಬಾಗಲಕೋಟೆ, ರೈತ ಉತ್ಪಾದಕ ಕಂಪನಿಗಳ ಯಶಸ್ಸಿನ ಕಡೆ ನಮ್ಮ ನಡೆ ಕುರಿತು ಮಾತನಾಡಿ, ರೈತ ಉತ್ಪಾದನ ಕಂಪನಿಗಳು ನೇರವಾಗಿ ವ್ಯವಹಾರಕ್ಕೆ ಕೈಹಾಕಬಾರದು ಒಂದು ಎರಡು ವರ್ಷ ತುಂಬ ಅನುಭವಗಳನ್ನು ಪಡೆಯಬೇಕು ಕ್ಷೇತ್ರ ಭೇಟಿಗಳನ್ನು ಮಾಡಿ ತಿಳಿದುಕೊಳ್ಳಬೇಕು. ಕಲಿಕೆ ಮತ್ತು ಅನುಭವದಿಂದ ಕಂಪನಿಯನ್ನು ನಾವು ಅಭಿವೃದ್ಧಿ ಪಡಿಸಬಹುದು ಎಂದು ಹೇಳಿ, ತಮ್ಮ ಕಂಪನಿಯು ರಾಷ್ಟ್ರ ಮಟ್ಟದಲ್ಲಿ ಗುರಿತಿಸಿಕೊಂಡು ಭಾರತ ದೇಶದ ಪ್ರಧಾನಿಯವರಿಂದ ಪ್ರಶಂಸೆ ಪಾತ್ರವಾಗಿದೆ ಎಂದರು.
ಶ್ರೀ ಸಿದ್ದಪ್ಪ ಅಂಗಡಿ ಹಿರಿಯ ತಾಂತ್ರಿಕ ಅಧಿಕಾರಿಗಳು ಕೆವಿಕೆ ಬಾಗಲಕೋಟೆ ಪ್ರಸ್ತುತ ಯುಗದಲ್ಲಿ ಸಾವಯವ ಕೃಷಿಯ ಪ್ರಾಮುಖ್ಯತೆ. ಶ್ರೀ ಜಿ.ವಿ. ಕೃಷ್ಣ ಸಿಎ ಬೆಂಗಳೂರು ಕಂಪನಿಯ ನಿಯಮಗಳು ಕುರಿತು ಇವರುಗಳು ಮಾತನಾಡಿದರು. ರಾಜ್ಯ ಪ್ರಶಸ್ತಿ ವಿಜೇತರಾದ ಬಿ. ಪ್ರಾಣೇಶ ಹಾಸ್ಯ ಕಲಾವಿದರು ಮಾತನಾಡಿ ನಮ್ಮ ದೇಶ ಮತ್ತು ನಮ್ಮ ಜಿಲ್ಲೆ ಅತ್ಯಂತ ರೈತ ಕುಟುಂಬಗಳನ್ನು ಹೊಂದಿದೆ. ರೈತರು ಅನೇಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಾರೆ. ಇದರಿಂದ ಯಾವ ರೈತನು ಆತ್ಮಹತ್ಯೆ ಮಾಡಿಕೊಳ್ಳಬಾರದು. ನಾವು ಬರುವ ದಿನಮಾನಗಳಲ್ಲಿ ಸರ್ವೋದಯ ಸಂಸ್ಥೆಯ ರೈತರ ರಾಯಬಾರಿಗಳಾಗಿ ಸೇವೆಸಲ್ಲಿಸಲು ಸಿದ್ದರಿದ್ದೇವೆ. ರೈತ ಉತ್ಪಾದನ ಕಂಪನಿಗಳು ಮತ್ತು ಸರ್ಕಾರದ ಯೋಜನೆಗಳನ್ನು ಪಡೆದು ಅನ್ನದಾತ ಅಭಿವೃದ್ಧಿ ಹೊಂದಬೇಕು ಎಂದು ಹೇಳುತ್ತಾ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಸಂದರ್ಭದಲ್ಲಿ ಶ್ರೀ ಬಿ. ಪ್ರಾಣೇಶ ಹಾಸ್ಯ ಕಲಾವಿದರು ಗಂಗಾವತಿ ಇವರಿಗೆ ಸರ್ವೋದಯ ಸಂಸ್ಥೆ ಮತ್ತು ಐದು ರೈತ ಉತ್ಪಾದಕರ ಕಂಪನಿಗಳಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ನಾಗರಾಜ ದೇಸಾಯಿ, ಕಾರ್ಯದರ್ಶಿ ಶಂಕ್ರಪ್ಪ ಎಮ್ ಎಚ್, ಯೋಜನ ನಿರ್ದೇಶಕಿ ದೀಪಾ, ಸಿಇಒ ಪ್ರೀಯಾ, ಶರಣಪ್ಪ ಸಿಂಗನಾಳ, ರಾಘವೇಂದ್ರ ಕೆ, ಉಪಸ್ಥಿತರಿದ್ದರು.